"ರವೀಂದ್ರ ಸಿನ್ಹ ಅನಿರುದ್ಧ ಸಿನ್ಹ ಜಡೇಜಾ " ಓರ್ವ ಭಾರತೀಯ ಕ್ರಿಕೆಟ್ ಆಟಗಾರ..ಇವರು ಎಡಗೈ ಬ್ಯಾಟ್ಸ್ಮನ್ ಹಾಗು ಲೆಗ್ ಸ್ಪಿನ್ ಬೌಲರ್. ಐಪಿಎಲ್‍ನಲ್ಲಿ ಗುಜರಾತ್ ಲೈಯನ್ಸ್ 2017-09-01 ವೇಬ್ಯಾಕ್ ಮೆಷಿನ್ ನಲ್ಲಿ. ತಂಡದ ಪರ ಆಡುತ್ತಾರೆ. == ಆರಂಭಿಕ ಜೀವನ == ಇವರ ಜನನ ೦೬ ಡಿಸೆಂಬರ್ ೧೯೮೮, ನವಂಘದ, ಗುಜರಾತ್ ನಲ್ಲಿ ಜನಿಸಿದರು.೨೦೦೫ರಲ್ಲಿ ೧೯ರ ವಯೋಮಿತಿಯ ತಂಡದಲ್ಲಿ ಸ್ಥಾನವನ್ನು ಪಡೆದರು.ತಂದೆ ಕಾವಲುಗಾರರಾಗಿದ್ದರು.ಇವರ ತಂದೆಗೆ ರವೀಂದ್ರ ಜಡೇಜಾ ಓರ್ವ ಯೋಧನಾಗಬೇಕೆಂದು ಆಸೆ ಇತ್ತು. ತನ್ನ ತಾಯಿಯ ಮರಣದಿಂದ ಕ್ರಿಕೆಟ್ ಆಡದೆ ಇರಲು ನಿರ್ಧರಿಸಿದ್ದರು. == ವೃತ್ತಿ ಜೀವನ == === ಅಂತರರಾಷ್ಟ್ರೀಯ ಕ್ರಿಕೆಟ್ === ರವೀಂದ್ರ ಜಡೇಜಾ ಅವರು ೦೮ ಫೆಬ್ರವರಿ ೨೦೦೯ ರಂದು ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅಜೇಯ ೬೦ ರನ್ ಬಾರಿಸಿದ್ದರು. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ಇವರು ಆಟಗಾರರಾಗಿದ್ದಾರೆ. === ಶ್ರೇಯಾಂಕ === ಪ್ರಸ್ತುತ ಜಡೇಜಾರವರು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಶ್ರೇಯಾಂಕಗಳಲ್ಲಿ, ಟೆಸ್ಟ್ ಕ್ರಿಕೆಟ್ನ ಬಾಲಿಂಗ ವಿಭಾಗದ ಶ್ರೇಯಾಂಕದ ಪಟ್ತಿಯಲ್ಲಿ ೧ನೇ ಸ್ಥಾನವನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ಆಲ್ ರೌಂಡರ್ ಶ್ರೇಯಾಂಕದ ಪಟ್ತಿಯಲ್ಲಿ ೧ನೇ ಸ್ಥಾನವನ್ನು ಹೊಂದಿದ್ದಾರೆ. ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೧೩ನೇ ಸ್ಥಾನವನ್ನು ಹೊಂದಿದ್ದಾರೆ. == ಪ್ರಶಸ್ತಿಗಳು == ಮಾಧವರಾವ್ ಸೈಂದಿಯ ಪ್ರಶಸ್ತಿ === ಸಾಧನೆ === ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ೧೧ರ ಬಳಗದಲ್ಲಿ ಸ್ಥಾನ (೨೦೧೩,೨೦೧೬). == ಉಲ್ಲೇಖಗಳು ==